ಫ್ರೆಡರಿಕ್ ಆಗಸ್ಟಸ್ ಅಬೆಲ್ ಆಂಗ್ಲ ರಸಾಯನಶಾಸ್ತ್ರಜ್ಞ. ೧೮೨೭ ಜುಲೈ ೧೭ರಂದು ಲಂಡನ್ನಿನಲ್ಲಿ ಜನಿಸಿದರು. = ವಿದ್ಯಾಭ್ಯಾಸ = ಜೋಹಾನ್ ಲಿಯೋಪೋಲ್ಡ್ ಅವರ ಮಗನಾಗಿ ಜನಿಸಿದ ಅಬೆಲ್,ರಸಾಯನಶಾಸ್ತ್ರವನ್ನು ರಾಯಲ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಷನ್ನಲ್ಲಿ ಅಧ್ಯಯನ ಮಾಡಿದರು ಮತ್ತು ೧೮೪೫ರಲ್ಲಿ ರಾಯಲ್ ಕಾಲೇಜ್ ಆಫ್ ಕೆಮಿಸ್ಟ್ರಿಯಲ್ಲಿ ಎ.ಡಬ್ಲ್ಯೂ.ವೋನ್ ಹೋಫ್ಮನ್ ಅವರ ೨೬ ಮೂಲ ವಿಧ್ಯಾರ್ಥಿಗಳಲ್ಲಿ ಒಬ್ಬರಾದರು. ೧೮೫೨ರಲ್ಲಿ ಮಿಲಿಟರಿ ಅಕಾಡೆಮಿಯಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡರು. = ವೃತ್ತಿಜೀವನ = ೧೮೫೪ರಿಂದ ೧೮೮೮ರವರೆಗೆ ರಾಯಲ್ ಆರ್ಸೆನಲ್ನ ಕೆಮಿಕಲ್ ಎಸ್ಟಾಬ್ಲಿಶ್ಮೆಂಟ್ನಲ್ಲಿ ರಕ್ಷಣೆಯ ರಸಾಯನಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಮೂರು ವರ್ಷಗಳ ನಂತರ ವಾರ್ ಡಿಪಾರ್ಟ್ಮೆಂಟ್ಗೆ ರಸಾಯನಶಾಸ್ತ್ರಜ್ಞರಾಗಿ ಹಾಗೂ ಸರ್ಕಾರದ ರಾಸಾಯನಿಕ ರೆಫರಿಯಾಗಿ ನೇಮಕವಾದರು.ನಂತರ ಸ್ಪೋಟಕಗಳ ರಸಾಯನಶಾಸ್ತ್ರದೊಂದಿಗೆ ಹೆಚ್ಚಿನ ಕೆಲಸವನ್ನು ಮಾಡಿದರು. = ವೈಯಕ್ತಿಕಜೀವನ = ಅಬೆಲ್ ತನ್ನ ಮೊದಲ ಹೆಂಡತಿಯಾದ ಸಾರಾ ಬ್ಲಾಂಚ್ ಅವರ ಮರಣದ ನಂತರ ಎರಡನೆ ಬಾರಿ ಗಿಲ್ಯೆಟ್ಟಾ ಡೆ ಲಾ ಫೆಯಿಲ್ಲಡೆಯನ್ನು ವಿವಾಹವಾದರು.. = ಪುಸ್ತಕಗಳು = ದಿ ಮಾಡರ್ನ್ ಹಿಸ್ಟರಿ ಆಫ್ ಗನ್ ಪೌಡರ್ (೧೮೬೬). ಗನ್-ಕಾಟನ್ (೧೮೬೬). ಓನ್ ಎಕ್ಸ್ಪ್ಲೋಸಿವ್ ಏಜೆಂಟ್ಸ್ (೧೮೭೨). ರಿಸರ್ಚ್ ಇನ್ ಎಕ್ಸ್ಪ್ಲೋಸಿವ್ಸ್ (೧೮೭೫). ಇಲೆಕ್ಟ್ರಿಸಿಟಿ ಅಪ್ಲೈಡ್ ಟು ಎಕ್ಸ್ಪ್ಲೋಸಿವ್ ಪರ್ಪಸಸ್ (೧೮೯೮). = ನಿಧನ = ಅಬೆಲ್ ಸೆಪ್ಟೆಂಬರ್ ೬,೧೯೦೨ರಂದು ಲಂಡನ್ನಿನ ವೈಟ್ ಕೋರ್ಟ್ ಹಾಲ್ನಲ್ಲಿ ನಿಧನರಾದರು. = ಉಲ್ಲೇಖಗಳು =